ವಿಶ್ವ ವ್ಯಾಪಾರ ಸಂಘಟನೆ ಅಂತರ್ರಾಷ್ಟ್ರೀಯ ವ್ಯಾಪಾರವನ್ನು ಮುಕ್ತವಾಗಿ ಮಾಡಲು ನಿಯಮಾವಳಿಗಳನ್ನು ರಚಿಸಲು ಇರುವ ಸಂಘಟನೆ. ಈ ಸಂಘಟನೆಯ ಮುಖ್ಯ ಕಚೇರಿಯು ಸ್ವಿಟ್ಜರ್ಲ್ಯಾಂಡ್ ದೇಶದ ಜಿನೀವಾ ನಗರದಲ್ಲಿದೆ. ಈ ಸಂಸ್ಥೆಯನ್ನು ಜನವರಿ ೧ ೧೯೯೫ರಂದು ಸಂಸ್ಥಾಪಿಸಲಾಯಿತು.